ಸಿರಿವಂತಿಕೆಗೆ ಸರಳ ಸೂತ್ರಗಳು / Sirivantikege Sarala Sutragalu
Author: Rangaswamy Mookanahalli
Pages: 152
Edition: 2025
Book Size: 1/8th Demmy
Binding: Paper Back
Publisher: Sawanna Enterprises
Description
ಸಿರಿವಂತಿಕೆಗೆ ಸರಳ ಸೂತ್ರಗಳು / Sirivanthikege Sarala Sutragalu – ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ಲೇಖನಗಳ ಸಂಗ್ರಹವಾಗಿದೆ. ಕೃತಿಯಲ್ಲಿ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆಯುತ್ತಾ,’ನಾನು ಅತ್ಯಂತ ಇಷ್ಟಪಡುವ ವ್ಯಕ್ತಿ ಲೀ ಕ ಶಿಂಗ್ ಹೇಳುತ್ತಾರೆ: ಬದುಕು, ಭವಿಷ್ಯ, ಸಂತೋಷ, ಶ್ರೀಮಂತಿಕೆ ಎಲ್ಲವನ್ನೂ ಪ್ಲಾನ್ ಮಾಡಬಹುದು! ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಇವರು. ಅವರ ಪ್ರಕಾರ, Life can be designed. Careers can be planned. Happiness can be prepared. ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ ಅಲ್ವಾ? ಇಂದಿಗೆ 95ರ ಲೀ ಕ ಶಿಂಗ್ 15ನೇ ವಯಸ್ಸಿಗೆ ಶಾಲೆ ಬಿಟ್ಟು ದಿನಕ್ಕೆ 16 ತಾಸು ದುಡಿಯಲು ಶುರು ಮಾಡಿದವರು. ನಿಮಗೆಲ್ಲಾ ಗೊತ್ತಿರಲಿ ಜಗತ್ತಿನ ಮಿಲಿಯನೇರ್ ಮತ್ತು ಬಿಲಿಯನೇರ್‌ಗಳಲ್ಲಿ 85 ಪ್ರತಿಶತ ಸೆಲ್ಫ್ ಮೇಡ್. ಅವರಿಗೂ ನಿಮ್ಮಂತೆ, ನನ್ನಂತೆ ಫ್ಯಾಮಿಲಿ, ಸಂಪತ್ತು ಅಥವಾ ಗಾಡ್‌ಫಾದರ್ ಇರಲಿಲ್ಲ. ಇಂದಿಗೆ ಅವರು ಹಾಂಗ್ ಕಾಂಗ್‌ನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು! ಜಾಗತಿಕ ಮಟ್ಟದಲ್ಲೂ ಅತಿ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ಸಾಧ್ಯವಾದರೆ ಅದು ನಮಗೂ ಸಾಧ್ಯ. ಇಂದಿಗೆ ಶ್ರೀಮಂತಿಕೆಗೆ ಲೀ ಕ ಶಿಂಗ್ ಮಾಡೆಲ್ ಅತ್ಯಂತ ಸೂಕ್ತವಾಗಿದೆ. ಏನಿದು ಲೀ ಕ ಶಿಂಗ್ ಮಾಡೆಲ್ ಎನ್ನುವುದರ ಬಗ್ಗೆ ಪುಸ್ತಕದಲ್ಲಿ ವಿವರವಿದೆ’ ಎಂದಿದ್ದಾರೆ.
